ಹೀಗೊಂದು
ದಿನ ಸಮುದ್ರದ ತೀರದ ಮೇಲೆ
ಒಬ್ಬಳು ಸುಂದರಿ ಮತ್ತು ಒಬ್ಬಳು
ಕುರೂಪಿ ಮೀಟ್ ಆದರು.
ಸಂತೋಷದಲ್ಲಿ "ನಾವು
ಸಮುದ್ರದಲ್ಲಿ ಈಜಾಡೋಣ" ಅಂತ ಒಬ್ರಿಗೊಬ್ರು ಅಂದುಕೊಂಡರು.
ಸ್ವಲ್ಪ
ಸಮಯ ಇಬ್ಬರೂ ಸಮುದ್ರದಲ್ಲಿ ಈಜಾಡಿದರು.
ಮೊದಲು ಕುರೂಪಿ ಯುವತಿ ಸಾಕಾಗಿ
ಮೇಲೆ ಬಂದವಳು, ಸುಂದರಿ ಯುವತಿಯ
ಬಟ್ಟೆ ಹಾಕಿಕೊಂಡು ಹೊರಟು ಹೋದಳು. ಸ್ವಲ್ಪದರಲ್ಲೇ,
ಸುಂದರ ಯುವತಿಯೂ ಸಾಕಾಗಿ ಬಂದಳು
. ಅವಳ ಬಟ್ಟೆ ಮಾಯವಾಗಿತ್ತು. ಮನಸ್ಸಿಲ್ಲದಿದ್ದರೂ,
ಬೇರೆ ದಾರಿಇಲ್ಲದ್ದರಿಂದ ಉಳಿದ ಕುರೂಪಿ ಬಟ್ಟೆಯನ್ನೇ
ಹಾಕಿಕೊಂಡು ಅವಳೂ ಹೊರಟು ಹೋದಳು.
ಅದಕ್ಕಾಗಿ
ಇವತ್ತಿನವರೆಗೂ, ಎಲ್ಲರೂ ಸುಂದರಿಯನ್ನು ಕುರೂಪಿಯೆಂದೂ,
ಕುರೂಪಿಯನ್ನು ಸುಂದರಿಯೆಂದೂ ತಿಳಿಯುತ್ತಾರೆ.
ಸುಂದರಿ
ಯುವತಿಯ ಮುಖವನ್ನು ನೋಡಿದ ಕೆಲವರು ಅವಳನ್ನು
ಸರಿಯಾಗಿ ಗುರುತಿಸುತ್ತಾರೆ. ಹಾಗೆ ಕುರುಪಿಯ ಮುಖ
ನೋಡಿದವರು ಅವಳನ್ನು ಗುರುತಿಸುವಲ್ಲಿ ಮೋಸ
ಹೋಗುವದಿಲ್ಲ.
ಮಹಾ
ಸಂತ ಕಾಲಿಲ್ ಗಿಬ್ರಾನ್.