ನಾವಿಬ್ಬರೂ ಬೇರೆ ಆದಾಗ
ನಿಶಬ್ಧದಲ್ಲಿ ಕಣ್ಣೀರಿನಲ್ಲಿ
ಅರ್ಧ ಹೃದಯ ಒಡೆದವರಾಗಿ
ಅಗಲಿರಲು ವರುಷಗಳಕಾಲ
ಬಾಡಿತು ನಿನ್ನ ಕೆನ್ನೆ ,
ಶೀತಲ , ಶೀತಲವಾಯಿತು ನಿನ್ನ ಮುತ್ತು
ನಿಜವಾಗಿ ಆ ನಿಮಿಷ
ಭವಿಶ್ಯವಾಣಿ ಈ ದುಃಖಕ್ಕೆ
ಮುಂಜಾವಿನ ಹಿಮ ಕೊರೆಯಿತು
ಛಳಿ ನನ್ನ ಹಣೆಯಮೇಲೆ
ಅನ್ನಿಸಿತು ಮುನ್ಸೂಚನಯಂತೆ
ಈ ನನ್ನ ಭಾವನೆಗಳಿಗೆ
ನಿನ್ನ ಭರವಸೆಗಳೆಲ್ಲ ಮುರಿದಿವೆ
ಹಗುರಾಗಿದೆ ನಿನ್ನ ಕೀರ್ತಿ
ಕೇಳುತ್ತಿದೆ ನಿನ್ನ ಹೆಸರು ಆಡಿಕೊಳ್ಳುವುದು
ಒಪ್ಪುತ್ತೇನೆ ನನ್ನ ಪಾಲು
ಈ ಅಪಮಾನದಲ್ಲಿ
ದೂರುತ್ತಾರೆ ಅವರು ನಿನ್ನನ್ನು, ನನಗಿಂತ ಮೊದಲು
ಭರ್ಚಿಯಂತಿದೆ ನನ್ನ ಕಿವಿಗೆ
ನಡುಕ ಬರುತ್ತಿದೆ ನನ್ನ ಮೈ ಮೇಲೆ
ನೀನೇಕೆ ಅಷ್ಟು ಪ್ರಿಯವಾಗಿದ್ದೆ ನನಗೆ?
ಅವರಿಗೆ ತಿಳಿದಿಲ್ಲ ನೀನು ನನಗೆ ಪರಿಚಿತ ಎಂದು
ನಿನ್ನಬಗ್ಗೆ ಬಹಳವೇ ತಿಳಿದಿತ್ತು ನನಗೆ
ಬಹಳ ಬಹಳ ಕಾಲದವರೆಗೆ
ಶೋಕಿಸುತ್ತೇನೆ ನಾನು ನಿನ್ನನ್ನು
ದುಃಖಿಸುತ್ತೇನೆ ರಾತ್ರಿಯ ನಿಶ್ಶಬ್ಧದಲ್ಲಿ
ನಿನ್ನ ಹೃದಯ ಮರೆಯಬಹುದು
ನಿನ್ನ ಜೀವ ಮೋಸಹೋಗಲಿ
ಒಂದುವೇಳೆ, ಭೇಟಿಯಾದರೆ ನಿನ್ನ, ನಾನು
ಬಹಳ ವರುಷಗಳ ನಂತರ
ಹೇಗೆ ಕರೆಯಲಿ ನಾನು ನಿನ್ನ?
ಮೌನದಲ್ಲಿ ಕಣ್ಣೀರಿನಲ್ಲಿ.
ಲಾರ್ಡ್ ಬೈರೋನ್ -
ಕನ್ನಡಕ್ಕೆ ಶೇಷಗಿರಿ ಹೆಗಡೆ