ಎರಡು ದಾರಿಗಳು ಒಣಗಿದ ಕಾಡಿನಲ್ಲಿ ಕವಲಾದವು
ಕ್ಷಮಿಸಿ, ಎರಡೂ ದಾರಿಗಳಲ್ಲಿ ಹೋಗಲಾಗುತ್ತಿರಲಿಲ್ಲ
ಒಬ್ಬನೇ ಪ್ರವಾಸಿಯಾದ್ದರಿಂದ
ಬಹಳ ಕಾಲದವರೆಗೆ ನಿಂತೆ ನನ್ನ ಕಣ್ಣಿಗೆ ಕಾಣುವ ವರೆಗೆ
ಒಂದು ದಾರಿ ಜಡ್ಡುಗಳಲ್ಲಿ ತಿರುಗುವವರೆಗೆ
ಆಮೇಲೆ ಇನ್ನೊಂದು ದಾರಿ ಆರಿಸಿಕೊಂಡೆ
ಬಹುಶಃ ಅದು ಹಸಿರಾಗಿತ್ತು, ಅದು ಸವೆಯ ಬೇಕಾಗಿತ್ತು
ಅಲ್ಲದೆ ಯಾರದ್ದೂ ಆಗಿರದರಿಂದ, ನನ್ನದಾಗಬಹುದಿತ್ತು
ಆದರೂ, ಹೋಗುವುದು ಎರಡರಲ್ಲೂ ಇತ್ತು
ಆ ಮುಂಜಾನೆ ಸರಿಸಮವಾಗಿದ್ದವು ಎರಡೂ
ಎಲೆಗಳಮೇಲೆ ಯಾವ ಹೆಜ್ಜೆಗಳ ಕಪ್ಪೂ ಇರಲಿಲ್ಲ
ಒಹ್! ನಾನು ಮೊದಲನೆಯದನ್ನು ಇನ್ನೊಂದು ದಿನಕ್ಕಾಗಿ ಇಟ್ಟೆ
ತಿಳಿದೇ ಇದೆ ಹೇಗೆ ಒಂದು ದಾರಿ ಇನ್ನೊಂದಕ್ಕೆ ಕೊಂಡಿಯಾಗಿತ್ತದೆ
ಸಂಶಯ ಇತ್ತು ನನಗೆ ಯಾವಾಗಾದರೂ ತಿರಿಗಿ ಬರಬಹುದಾ ಅಂತ
ನಾನು ಹೇಳುತ್ತೇನೆ ನಿಮಗೆ ನಿಟ್ಟುಸಿರುಬಿಟ್ಟು
ಬಹಳ ಕಾಲಗಳ ಹಿಂದೆ ಎಲ್ಲೂ ಒಂದುಕಡೆ
ಎರಡು ದಾರಿಗಳು ಒಣಗಿದ ಕಾಡಿನಲ್ಲಿ ಬಯಲಾದವು
ನಾನು ಜನ ಕಡಿಮೆ ಬಳಸಿದ ದಾರಿ ಆರಿಸಿಕೊಂಡೆ
ಅದು ಈ ಎಲ್ಲ ವ್ಯತ್ಯಾಸ ಮಾಡಿದೆ
ರಾಬರ್ಟ್ ಫ್ರಾಸ್ಟ್